Mallamma Nudi

ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆ ವಿರೋಧಿಸಿ ಏಪ್ರಿಲ್ ೨ರಂದು ರ‍್ಯಾಲಿ

1st April 2025

News image

ಲಿಂಗಸುಗೂರು : ಬಸನಗೌಡ ಪಾಟೀಲ್ ಯತ್ನಾಳ ರವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವುದರನ್ನು ವಿರೋಧಿಸಿ ಲಿಂಗಸುಗೂರು ಪಟ್ಟಣದಲ್ಲಿ ಏಪ್ರಿಲ್ ೨ರಂದು ಬೆಳಗ್ಗೆ ೧೦ಗಂಟಗೆ ರ‍್ಯಾಲಿ ನಡೆಸಲಾಗುವುದೆಂದು ವೀರಶೈವ ಲಿಂಗಾಯತ ಪಂಚಮಾಲಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಡಾ.ಸುಭಾಸ್ ಪಲ್ಲೇದ ಯುವ ಘಟಕದ ಅಧ್ಯಕ್ಷ ಮಹೇಶ ಪಾಟೀಲ್ ಅಮರಾವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯುಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರವರ ಕುಮ್ಮಕ್ಕಿನಿಂದ ಹಿಂದುಗಳ ಹುಲಿ ಎಂದು ಹೆಸರಾದ ಬಸನಗೌಡ ಪಾಟೀಲ್ ಯತ್ನಾಳ ರವರನ್ನು ೬ ವರ್ಷಗಳ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇದನ್ನು ಖಂಡಿಸಿ ವೀರಶೈವ ಲಿಂಗಾಯತ ಪಂಚಮ ಸಾಲಿ ಸಮುದಾಯದ ಹಾಗೂ ಇತರೆ ಸಮುದಾಯಗಳೊಂದಿಗೆ ಪಟ್ಟಣದ ರಾಯಚೂರು ರಸ್ತೆಯ ಲಕ್ಷ್ಮೀ ಗುಡಿ ದೇವಸ್ಥಾನದಿಂದ ಈಶ್ವರ ದೇವಸ್ಥಾನದ ವರೆಗೂ ರ‍್ಯಾಲಿ ನಡೆಸಲಾಗುತ್ತದೆ. ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ರ‍್ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Comments
Show comments
ಸಂಬಂಧಿತ ಲೇಖನಗಳು
ಮಲ್ಲಮ್ಮ ನುಡಿ ವಾರ್ತೆ
4th April 2025

ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ

ಮಲ್ಲಮ್ಮ ನುಡಿ ವಾರ್ತೆ
4th April 2025

ಹೆಚ್ಚುವರಿ ೫೦ ಸಾವಿರ ಮನೆ ಮಂಜೂರು ಮಾಡಿ-ಸಂಸತ್‌ನಲ್ಲಿ ಸಾಗರ ಖಂಡ್ರೆ ಒತ್ತಾಯ

ಮಲ್ಲಮ್ಮ ನುಡಿ ವಾರ್ತೆ
4th April 2025

ಸಿದ್ಧಾರೂಢ ಸ್ವಾಮಿಗಳು ಆಧ್ಯಾತ್ಮಿಕ ಪ್ರವೀಣರು:ಹಾವಗಿಲಿಂಗೇಶ್ವರ ಶಿವಾಚಾರ್ಯ

ಮಲ್ಲಮ್ಮ ನುಡಿ ವಾರ್ತೆ
4th April 2025

ಹಿರಿಯ ಜೀವಿ ನೀಲಕಂಠ ಹಂಗರಗೆ ನಿಧನ

ಮಲ್ಲಮ್ಮ ನುಡಿ ವಾರ್ತೆ
4th April 2025

ಅನಾಥರನ್ನು ಪೋಷಿಸುವುದು ವಕ್ಫ್ ನ ಮೂಲ ಉದ್ದೇಶವಾಗಿತ್ತು

ಮಲ್ಲಮ್ಮ ನುಡಿ ವಾರ್ತೆ
4th April 2025

ದೇವಸ್ಥಾನ, ದೇವರು, ಭಾರತೀಯ ಸಂಸ್ಕ್ರತಿಯ ಪ್ರತೀಕ : ಶಾಸಕ ತುನ್ನೂರು ಅಭಿಪ್ರಾಯ.

ಪ್ರಕಾಶಕರು
Ramesh Reddy